ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು.
ನಾವು ನಾಲ್ಕು ಜನ ಹವ್ಯಾಸಿ ಛಾಯಾಚಿತ್ರಗ್ರಾಹಕರು ತೆಗದ ಒ೦ದಿಷ್ಟು ಫೋಟೋಗಳನ್ನು ಜನರ ಮಧ್ಯೆ ಹ೦ಚಿಕೊಳ್ಳುವ ಪ್ರಯತ್ನವೇ ಈ "ಕಪ್ಪು ಬಿಳುಪು". ತೀರಾ ಕೆಲವೊಮ್ಮೆ ಅವಶ್ಯಕ ಎನ್ನಿಸಿದಲ್ಲಿ ಒ೦ದು ಪುಟ್ಟ ವಿವರಣೆಯ ಹೊರತಾಗಿ ಬಹುತೇಕ ಉಳಿದಿದ್ದನ್ನೆಲ್ಲ ಫೋಟೋದ ಮೂಲಕವೇ ಹೇಳುವ ಪ್ರಯತ್ನ ನಾವು ಇಲ್ಲಿ ಮಾಡಿದ್ದೇವೆ.
ಕೆಲವು ಫೋಟೋಗಳು ನೋಡುಗರಿಗೆ ಇಷ್ಟವಾದರೆ, ಇನ್ನೂ ಕೆಲವು ಕವನಗಳಿಗೆ ಸ್ಪೂರ್ತಿಯಾದವು. ಕಪ್ಪು ಬಿಳುಪು 9 ಶ್ರೀವತ್ಸ ಜೋಶಿಯವರು ವಿಜಯಕನಾ೯ಟಕದಲ್ಲಿ ಬರೆಯುತ್ತಿದ್ದ ವಿಚಿತ್ರಾನ್ನ ಅ೦ಕಣದಲ್ಲಿ ಚಿತ್ರಿತವಾಯಿತು. ಕಪ್ಪು ಬಿಳುಪು - 67ಹೊಳೆಬಾಗಿಲು ಪುಸ್ತಕಕ್ಕೆ ಮುಖಪುಟ ವಾಯಿತು. ಮತ್ತೆ ಕೆಲ ನೋಡುಗರು ತಮ್ಮ ಸಲಹೆಗಳನ್ನು, ಹೊಸ ವಿಚಾರಗಳನ್ನು ನಮ್ಮಲ್ಲಿ ಅನಿಸಿಕೆಗಳ ರೂಪದಲ್ಲಿ ವಿನಿಮಯ ಮಾಡಿಕೊ೦ಡರು. ನಮ್ಮ ಈ ಕನಸಿನ ಕೂಸು ಮೂರುವರ್ಷದಲ್ಲಿ ಮೂವತ್ತು ಸಾವಿರಕ್ಕೂ ಮಿಕ್ಕ ಪುಟ ವೀಕ್ಷಣೆಗೆ ಒಳಗಾಗಿದ್ದು ನಮ್ಮ ಹೆಮ್ಮೆ.
ಕಪ್ಪು - ಬಿಳುಪು ಎಂಬುದು ಇಲ್ಲಿ ಸಾಂಕೇತಿಕ ಹೆಸರು ಮಾತ್ರ. ವರ್ಣ ವೈವಿಧ್ಯವಿರಲಿ ಬರೆ ಬೆಳಕು ನೆರಳಿನಾಟವಿರಲಿ ಫೋಟೋಗ್ರಫಿಯ ವಿವಿಧ ಆಯಾಮ ಮಜಲುಗಳ ಆವಿಷ್ಕಾರವೇ ನಮ್ಮ ಮುಖ್ಯ ಉದ್ದೇಶ. ನೋಡುಗರ ಅಭಿಪ್ರಾಯಗಳೇ ನಮಗೆ ಇಲ್ಲಿ ಸ್ಪೂರ್ತಿ ಮುಂದಿನ ಪ್ರಯೋಗಗಳಿಗೆ ಒಂದು ಬೆಳಕಿಂಡಿ.
ಟೀಮ್ ಕಪ್ಪು-ಬಿಳುಪು.
- ಹರ್ಷ , ಶ್ರೀನಿಧಿ, ಕೃಷ್ಣ ಮತ್ತು ನಾರಾಯಣ


1 comments:
lovely
Post a Comment