Powered by Blogger.

Thursday, December 29, 2011

ಕಪ್ಪು ಬಿಳುಪು ೧೯೧

ಹೊಸ ವರುಷವು ನಿಮ್ಮೆಲ್ಲರಿಗೂ ಹೊಸ ಹರುಷವನ್ನು ತರಲಿ ಎಂದು ಹಾರೈಸುತ್ತಾ...

3 comments:

sunaath December 30, 2011 1:18 PM  

ಈ ಫೋಟೋ ೨೦೧೧ರ ಪ್ರತೀಕವೆ?!

ಕೃಷ್ಣ ಭಟ್ಟ December 30, 2011 2:07 PM  

ಹಾಗೇನೂ ಇಲ್ಲಾ. ನಿಮಗೇಕೆ ಹಾಗೆನಿಸಿತು? ನನಗೂ ತಿಳಿಸಿ.

L. PREMASHEKHARA December 30, 2011 6:23 PM  

ಸುನಾಥರ ವಿವರಣೆ ಏನಿರಬಹುದೆಂಬ ಕುತೂಹಲ ನನಗೂ ಇದೆ.

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು.

ನಾವು ನಾಲ್ಕು ಜನ ಹವ್ಯಾಸಿ ಛಾಯಾಚಿತ್ರಗ್ರಾಹಕರು ತೆಗದ ಒ೦ದಿಷ್ಟು ಫೋಟೋಗಳನ್ನು ಜನರ ಮಧ್ಯೆ ಹ೦ಚಿಕೊಳ್ಳುವ ಪ್ರಯತ್ನವೇ ಈ "ಕಪ್ಪು ಬಿಳುಪು". ತೀರಾ ಕೆಲವೊಮ್ಮೆ ಅವಶ್ಯಕ ಎನ್ನಿಸಿದಲ್ಲಿ ಒ೦ದು ಪುಟ್ಟ ವಿವರಣೆಯ ಹೊರತಾಗಿ ಬಹುತೇಕ ಉಳಿದಿದ್ದನ್ನೆಲ್ಲ ಫೋಟೋದ ಮೂಲಕವೇ ಹೇಳುವ ಪ್ರಯತ್ನ ನಾವು ಇಲ್ಲಿ ಮಾಡಿದ್ದೇವೆ.

ಕೆಲವು ಫೋಟೋಗಳು ನೋಡುಗರಿಗೆ ಇಷ್ಟವಾದರೆ, ಇನ್ನೂ ಕೆಲವು ಕವನಗಳಿಗೆ ಸ್ಪೂರ್ತಿಯಾದವು. ಕಪ್ಪು ಬಿಳುಪು 9 ಶ್ರೀವತ್ಸ ಜೋಶಿಯವರು ವಿಜಯಕನಾ೯ಟಕದಲ್ಲಿ ಬರೆಯುತ್ತಿದ್ದ ವಿಚಿತ್ರಾನ್ನ ಅ೦ಕಣದಲ್ಲಿ ಚಿತ್ರಿತವಾಯಿತು. ಕಪ್ಪು ಬಿಳುಪು - 67ಹೊಳೆಬಾಗಿಲು ಪುಸ್ತಕಕ್ಕೆ ಮುಖಪುಟ ವಾಯಿತು. ಮತ್ತೆ ಕೆಲ ನೋಡುಗರು ತಮ್ಮ ಸಲಹೆಗಳನ್ನು, ಹೊಸ ವಿಚಾರಗಳನ್ನು ನಮ್ಮಲ್ಲಿ ಅನಿಸಿಕೆಗಳ ರೂಪದಲ್ಲಿ ವಿನಿಮಯ ಮಾಡಿಕೊ೦ಡರು. ನಮ್ಮ ಈ ಕನಸಿನ ಕೂಸು ಮೂರುವರ್ಷದಲ್ಲಿ ಮೂವತ್ತು ಸಾವಿರಕ್ಕೂ ಮಿಕ್ಕ ಪುಟ ವೀಕ್ಷಣೆಗೆ ಒಳಗಾಗಿದ್ದು ನಮ್ಮ ಹೆಮ್ಮೆ.

ಕಪ್ಪು - ಬಿಳುಪು ಎಂಬುದು ಇಲ್ಲಿ ಸಾಂಕೇತಿಕ ಹೆಸರು ಮಾತ್ರ. ವರ್ಣ ವೈವಿಧ್ಯವಿರಲಿ ಬರೆ ಬೆಳಕು ನೆರಳಿನಾಟವಿರಲಿ ಫೋಟೋಗ್ರಫಿಯ ವಿವಿಧ ಆಯಾಮ ಮಜಲುಗಳ ಆವಿಷ್ಕಾರವೇ ನಮ್ಮ ಮುಖ್ಯ ಉದ್ದೇಶ. ನೋಡುಗರ ಅಭಿಪ್ರಾಯಗಳೇ ನಮಗೆ ಇಲ್ಲಿ ಸ್ಪೂರ್ತಿ ಮುಂದಿನ ಪ್ರಯೋಗಗಳಿಗೆ ಒಂದು ಬೆಳಕಿಂಡಿ.


ಧನ್ಯವಾದಗಳೊಂದಿಗೆ,


ಟೀಮ್ ಕಪ್ಪು-ಬಿಳುಪು.

- ಹರ್ಷ , ಶ್ರೀನಿಧಿ, ಕೃಷ್ಣ ಮತ್ತು ನಾರಾಯಣ

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP